Flash news
Friday, 26 September 2014
Thursday, 25 September 2014
Mangalayana celabration
ಶಾಲೆಯಲ್ಲಿ ಮಂಗಳಯಾನ ವಿಜಯೋತ್ಸವ ಕಾರ್ಯಕ್ರಮವು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ನೇತೃತ್ವದಲ್ಲಿ ನಡೆಯಿತು.ಅಧ್ಯಾಪಕರಾದ ಶರತ್ ಕುಮಾರ್ ಹಾಗು ಸುಭಾಶ್ ಮಕ್ಕಳಿಗೆ ಮಂಗಳಯಾನದ ಕುರಿತು ವಿವರಣೆ ನೀಡಿದರು.ಮಂಗಳಯಾನದ ಚಿತ್ರ ಪ್ರದರ್ಶನವನ್ನು ಕೂಡ ಈ ಸಂದರ್ಭದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.ನಂತರ ಅಧ್ಯಾಪಕ ಪ್ರಶಾಂತ ಕುಮಾರ್ ಧನ್ಯವಾದ ಸಮರ್ಪಿಸಿದರು.

Friday, 5 September 2014
Teachers day / Onam
ಶಾಲೆಯಲ್ಲಿ ಅಧ್ಯಾಪಕರ ದಿನ ಹಾಗು ಓಣಂ ಆಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಮೊದಲಿಗೆ ನಡೆದ ಸಭಾಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷ ನಾರಾಯಣ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಮುಖ್ಯೋಪಧ್ಯಾಯರಾದ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.ಮಕ್ಕಳು ಹೂ ನೀಡುವುದರ ಮೂಲಕ ಗುರುವಂದನೆ ಸಲ್ಲಿಸಿದರು.ಸಭೆಯಲ್ಲಿ ಪಂಚಾಯತ್ ನೀಡಿದ ಡೈರಿ ಹಾಗು ಮ್ಯಾಗಜಿನನ್ನು ಮಕ್ಕಳಿಗೆ ವಿತರಿಸಲಾಯಿತು.ಮಕ್ಕಳ ಅರಿವಿಗೆ ಕೈಪಿಡಿಯಾದ ಜ್ಞಾತಂ ಎಂಬ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಬಳಿಕ ಅಧ್ಯಾಪಕರಿಗೆ ಕೆಲವು ಸ್ಪರ್ದೆಗಳನ್ನು ಮಕ್ಕಳು ನಡೆಸಿದರು.ನಂತರ ಪೂಕ್ಕಳಂ ಹಾಗು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದು ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಂಜೆ ಪ್ರಧಾನಿಯವರ ಭಾಷಣವನ್ನು ಆಕಾಶವಾಣಿಯ ಮೂಲಕ ಕೇಳುವ ಅವಕಾಶ ಮಕ್ಕಳಿಗೆ ಮಾಡಿಕೊಡಲಾಯಿತು.

![]() |
ಭಾಷಣ ಆಲಿಸುತ್ತಿರುವ ಮಕ್ಕಳು |
Subscribe to:
Posts (Atom)