Wednesday 29 July 2015

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಟಿ ಎ ಅಧ್ಯಕ್ಷರಾದ ಶ್ರೀ ನಾರಾಯಣ ನಾಯ್ಕ್ ವಹಿಸಿದ್ದರು.ಅಧ್ಯಾಪಕರಾದ ಶ್ರೀ ಟಿ ಒ ಉಣ್ಣಿಕೃಷ್ಣನ್ ಹಾಗೂ ಶ್ರೀ ಶರತ್ ಕುಮಾರ್ ಯಂ  ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಶರ್ಮ,ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಾಲತಿ ಕಾರಮೂಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಮಹಾಲಿಂಗೇಶ್ವರ ಭಟ್ ಹಾಗೂ ಅಧ್ಯಾಪಕ ಎ ರಾಧಾಕೃಷ್ಣನ್ ವಾರ್ಷಿಕ ವರದಿಯನ್ನು ವಾಚಿಸಿದರೆ ಕೆ ಗಣೇಶ ಭಟ್ ಲೆಕ್ಕಪತ್ರ ಮಂಡಿಸಿದರು.
ಹೆತ್ತವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಈ ಸಭೆಯಲ್ಲಿ 'ರಕ್ಷಕರ ಅವಗಾಹನೆಗೆ' ಎಂಬ ಪ್ರತ್ಯೇಕ ತಿಳುವಳಿಕಾ ತರಗತಿಯನ್ನು ನಡೆಸಲಾಯಿತು.ಅಧ್ಯಾಪಕ ಅಬ್ದುಲ್ ಸಲಾಂ ಇದರ ನೇತೃತ್ವ ವಹಿಸಿದರು.2015-16ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರನ್ನಾಗಿ ಜೋನ್ ಡಿಸೋಜ ಹಾಗೂ ಉಪಾಧ್ಯಕ್ಷರನ್ನಾಗಿ ಜಯವಿಷ್ಣುರವರನ್ನು ಆಯ್ಕೆ ಮಾಡಲಾಯಿತು.ಅದೇ ರೀತಿ ಮಾತೃ ಸಂಘದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ನಳಿನಿ ಕಾಕುಂಜೆ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಶಾರದ ದೇವರಮೆಟ್ಟು ಆಯ್ಕೆಗೊಂಡರು.ಅಧ್ಯಾಪಿಕೆ ಶ್ರೀಮತಿ ಅಖಿಲಲಕ್ಷ್ಮಿ ಪ್ರಾರ್ಥನೆ ಹಾಡಿದ ಕಾರ್ಯಕ್ರಮಕ್ಕೆ ಸ್ಟಾಫ್ ಸೆಕ್ರೆಟರಿ ಶ್ರೀ ವಿ ವೆಂಕಟ್ರಾಜ ಸ್ವಾಗತಿಸಿದರೆ ಅಧ್ಯಾಪಕರಾದ ಶ್ರೀ ಕೃಷ್ಣನ್ ನಂಬೂದಿರಿ ವಂದಿಸಿದರು.ಅಧ್ಯಾಪಕರಾದ ಶ್ರೀ ಪ್ರಶಾಂತ ಕುಮಾರ್ ಬಿ ಕಾರ್ಯಕ್ರಮ ನಿರೂಪಿಸಿದರು.ಕೊನೆಗೆ ರಾಷ್ಟ್ರಗೀತೆಯೊಂದಿಗೆ ಸಭೆಯು ಸಮಾಪ್ತಿಗೊಂಡಿತು.






Tuesday 21 July 2015

Chandra Dina



ಸಸಿ ವಿತರಣೆ

ಪೆರಡಾಲ ಸರ್ವಿಸ್ ಕೋಪರೇಟಿವ್ ಬ್ಯಾಂಕ್ ವತಿಯಿಂದ ಆಲಿಲ ಪ್ರೋಜೆಕ್ಟ್ ಅಂಗವಾಗಿ ಅನುದಾನಿತ ಹಿರಿಯ ಬುನಾದಿ ಶಾಲಾ ಮಕ್ಕಳಿಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು.ಬ್ಯಾಂಕ್ ನಿರ್ದೇಶಕರಾದ ಶ್ರೀ ರಾಮಪ್ಪ ಮಂಜೇಶ್ವರ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬ್ಯಾಂಕ್ ನಿರ್ದೇಶಕರಾದ ಗಣಪತಿ ಪ್ರಸಾದ್ ಕುಳಮರ್ವ ಹಾಗು ಶ್ರೀಮತಿ ಜಯಂತಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.ಮುಖ್ಯೊಪಾಧ್ಯಾಯರಾದ ಮಹಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.ಅಧ್ಯಾಪಕರಾದ ವೆಂಕಟ್ರಾಜ ಸ್ವಾಗತಿಸಿದರೆ ಉಣ್ಣಿಕೃಷ್ಣನ್ ವಂದಿಸಿದರು.ಬಳಿಕ ಎಲ್ಲ ಮಕ್ಕಳಿಗೂ ಸಸಿ ವಿತರಿಸಲಾಯಿತು.