Sunday 16 November 2014

Parental Awarness Class

ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ತಾ 14/11/2014  ರಂದು ಬದಲಾದ ಶಿಕ್ಷಣ ನೀತಿಯಲ್ಲಿ ಹೆತ್ತವರ ಪಾತ್ರದ ಕುರಿತು ವಿಶೇಷ ತಿಳುವಳಿಕಾ ಶಿಬಿರವು ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರುರವರ ಜನ್ಮ ದಿನದಂದು ಮಕ್ಕಳ ದಿನಾಚರಣೆಯೊಂದಿಗೆ ಜರಗಿತು.ಮಕ್ಕಳಿಗಾಗಿ ಚಿತ್ರರಚನೆ,ಸಾಹಿತ್ಯ ಸಭೆ ಹಾಗೂ ವಿವಿಧ ಸ್ಪರ್ದೆಗಳು ನಡೆದವು.ನಂತರ ನಡೆದ ತಿಳುವಳಿಕಾ ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ವಹಿಸಿದ್ದರು.ಅಧ್ಯಾಪಕ ಕೃಷ್ಣನ್ ನಂಬೂದಿರಿ ಪ್ರಾಸ್ಥಾವಿಕ ನುಡಿಗಳನ್ನಾಡಿದರೆ,ಪ್ರಶಾಂತ ಕುಮಾರ್ ಬಿ ಶುಭ ಹಾರೈಸಿದರು.ಅಧ್ಯಾಪಕರಾದ ಅಬ್ದುಲ್ ಸಲಾಂ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.ಅಧ್ಯಾಪಕ ವಿ ವೆಂಕಟ್ರಾಜ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸುದರ್ಶನ ಎ ಧನ್ಯವಾದವನ್ನಿತ್ತರು.ಅಧ್ಯಾಪಕಿ ದಿನ ಕೆ ಕಾರ್ಯಕ್ರಮ ನಿರೂಪಿಸಿದರು.ಸುಮಾರು ನೂರಕ್ಕೂ ಅಧಿಕ ಹೆತ್ತವರು ಶಿಬಿರದ ಉಪಯೋಗವನ್ನು ಪಡೆದುಕೊಂಡರು.





Thursday 13 November 2014

ಸಾಕ್ಷರ ಸಾಹಿತ್ಯ ಸಭೆ

ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ಸಾಕ್ಷರ ತರಗತಿಯ ಮಕ್ಕಳ ಸಾಹಿತ್ಯ ಸಭೆಯು ಜರಗಿತು.ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.ಅಧ್ಯಾಪಕರಾದ ಉಣ್ಣಿಕೃಷ್ಣನ್ ಹಾಗೂ ವಿಜಯಲಕ್ಷ್ಮಿ ಶುಭಹಾರೈಸಿದರು.ಅಧ್ಯಾಪಕ ಶರತ್ ಕುಮಾರ್ ಯಂ ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮಿಥುನ್ ರಾಜ್ ವಂದಿಸಿದನು.ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದನು.ನಂತರ ಸಾಕ್ಷರ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು.




Vegitable Yielding



ಶಾಲಾ ತರಕಾರಿ ತೋಟದಲ್ಲಿ ಮಕ್ಕಳು ಬೆಳೆಸಿದ ತರಕಾರಿಗಳನ್ನು ಮುಖ್ಯೋಪಾಧ್ಯಾಯರು ಕೊಯ್ಯುತ್ತಿರುವುದು.

ಶಾಲಾ ತರಕಾರಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳು ವೀಕ್ಷಿಸುತ್ತಿರುವುದು.



ಶಾಲಾ ತರಕಾರಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳು ವೀಕ್ಷಿಸುತ್ತಿರುವುದು.

ಶಾಲಾ ತರಕಾರಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳು ವೀಕ್ಷಿಸುತ್ತಿರುವುದು.


Wednesday 5 November 2014

Sub District Sports meet

ಉಪಜಿಲ್ಲಾ ಮಟ್ಟದ ಆಟೋಟ ಸ್ಪರ್ದೆಗಳಲ್ಲಿ ಭಾಗವಹಿಸಿದ ನಮ್ಮ ಶಾಲಾ ಮಕ್ಕಳು..


Monday 27 October 2014

School level Youth Festival



ಶಾಲಾ ಮಟ್ಟದ ಕಲೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ಉದ್ಘಾಟಿಸಿದರು.ಅಧ್ಯಾಪಕರಾದ ಪ್ರಶಾಂತ ಕುಮಾರ್ ಬಿ ಹಾಗು ಜ್ಯೋತಿ ಶುಭ ಹಾರೈಸಿದರು.ಕೃಷ್ಣನ್ ನಂಬೂದಿರಿ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಶ್ರೀಮತಿ ವಿಜಯಲಕ್ಷ್ಮಿ ವಂದಿಸಿದರು.ಮಕ್ಕಳಿಗೆ ವಿವಿಧ ಸ್ಪರ್ದೆಗಳನ್ನು ನಡೆಸಲಾಯಿತು.

Monday 20 October 2014

C P T A Meeting..


\


ಶಾಲೆಯಲ್ಲಿ ಪಿ ಟಿ ಎ ಸಭೆಯು ತಾ-16/10/2014 ರಂದು ನಡೆಯಿತು.ಸಭೆಯ ಅಧ್ಯಕ್ಷತೆ ಯನ್ನು ಪಿ ಟಿ ಎ ಅಧ್ಯಕ್ಷ ನಾರಾಯಣ ನಾಯ್ಕ ವಹಿಸಿದ್ದರು.ಮಕ್ಕಳ ಕಲಿಕಾ ದಾಖಲೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.ಮಕ್ಕಳ ಕಲಿಕಾ ಪ್ರಗತಿಯ ಕುರಿತು ಚರ್ಚಿಸಲಾಯಿತು.

School Sports..





Thursday 25 September 2014

Mangalayana celabration

ಶಾಲೆಯಲ್ಲಿ ಮಂಗಳಯಾನ ವಿಜಯೋತ್ಸವ ಕಾರ್ಯಕ್ರಮವು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ನೇತೃತ್ವದಲ್ಲಿ ನಡೆಯಿತು.ಅಧ್ಯಾಪಕರಾದ ಶರತ್ ಕುಮಾರ್ ಹಾಗು ಸುಭಾಶ್ ಮಕ್ಕಳಿಗೆ ಮಂಗಳಯಾನದ ಕುರಿತು ವಿವರಣೆ ನೀಡಿದರು.ಮಂಗಳಯಾನದ ಚಿತ್ರ ಪ್ರದರ್ಶನವನ್ನು ಕೂಡ ಈ ಸಂದರ್ಭದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.ನಂತರ ಅಧ್ಯಾಪಕ ಪ್ರಶಾಂತ ಕುಮಾರ್ ಧನ್ಯವಾದ ಸಮರ್ಪಿಸಿದರು.