Flash news
Friday, 21 August 2015
Saturday, 15 August 2015
ಸ್ವಾತಂತ್ರ್ಯ ದಿನಾಚರಣೆ
ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ೬೯ನೇ
ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಕಗಳೊಂದಿಗೆ ಆಚರಿಸಲಾಯಿತು.ಶಾಲಾ
ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಶರ್ಮ ಧ್ವಜಾರೋಹಣಗೈದರು.ಬಳಿಕ ನಡೆದ ಸಭಾ
ಕಾರ್ಯಕ್ರಮದಲ್ಲಿ ಪಿ ಟಿ ಎ ಅಧ್ಯಕ್ಷರಾದ ಜೋನಿ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದರು.ವಾರ್ಡ್ ಸದಸ್ಯ ಜೋನಿ ಕ್ರಾಸ್ತ,ಮಾತೃ ಸಂಘದ ಅಧ್ಯಕ್ಷೆ ನಳಿನಿ ಕಾಕುಂಜೆ,
ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ವಿ ವೆಂಕಟ್ರಾಜ ಹಾಗೂ ಅಧ್ಯಾಪಕ ಶ್ರೀ ಟಿ ಒ
ಉಣ್ಣಿಕೃಷ್ಣನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಈ ವೇಳೆ ಸ್ವಾತಂತ್ರ್ಯೋತ್ಸವದ
ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು
ವಿತರಿಸಲಾಯಿತು.ಹಲವು ದಾನಿಗಳು,ಕ್ಲಬ್ ಗಳು ಹಾಗೂ ಪಂಚಾಯತ್ ವತಿಯಿಂದ ನೀಡಿದ
ಸಿಹಿತಿಂಡಿಯನ್ನು ವಿತರಿಸಲಾವಯಿತು.ಅಧ್ಯಾಪಕರಾದಶ್ರೀ ಕೃಷ್ಣನ್ ನಂಬೂದಿರಿ ಸ್ವಾಗತಿಸಿದ
ಸಭೆಗೆ ಶ್ರೀಮತಿ ವಿಜಯಲಕ್ಷ್ಮಿ ವಂದಿಸಿದರು.ಶ್ರೀ ಶರತ್ ಕುಮಾರ್ ಹಾಗೂ ಅಬ್ದುಲ್ ಸಲಾಂ
ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳು,ರಕ್ಷಕರು,ಶಿಕ್ಷಕರು ಜೊತೆಯಾಗಿ
ಸ್ವಾತಂತ್ರ್ಯ ದಿನ ಮೆರವಣಿಗೆಯನ್ನು ನಡೆಸಿದರು.
Thursday, 13 August 2015
Tuesday, 11 August 2015
Monday, 10 August 2015
Subscribe to:
Posts (Atom)